top of page

About The Book:

 

ಮೈಸೂರು ಸಂಸ್ಥಾನದ ರಾಜಕಾರ್ಯ ಧುರಂಧರ ಪ್ರಧಾನ ವೆಂಕಾಮಾತ್ಯ ಕೃತಿಯು ಹತ್ತು ಅಧ್ಯಾಯ ಹಾಗೂ ಎರಡು ಅನುಬಂಧಗಳನ್ನು ಅಡಕ ಮಾಡಿಕೊಂಡಿದೆ. ಕೃತಿಯು ಪ್ರಧಾನರ ಮೂಲ ಕಾರ್ಯಕ್ಷೇತ್ರವಾದ ತುಮಕೂರು ಪ್ರದೇಶದ ಇತಿಹಾಸದಿಂದ ಮತ್ತು ಅದರಲ್ಲಿ ಪ್ರಧಾನ ವೆಂಕಪ್ಪಯ್ಯನವರ ಪಾತ್ರವನ್ನು ಗುರುತಿಸುವುದರೊಂದಿಗೆ ಪ್ರಾರಂಭವಾಗುತ್ತದೆ. ಆನಂತರ ಪ್ರಧಾನರ ಹುಟ್ಟೂರಾದ ಅಕ್ಕಿರಾಮಪುರದ ಪರಂಪರೆ, ವೆಂಕಾಮಾತ್ಯರ ಜೀವನದ ಯಶೋಗಾಥೆ, ಸೀಬಿ ದೇವಾಲಯದಲ್ಲಿ ಕಂಡುಬರುವ ವೆಂಕಾಮಾತ್ಯರ ವರ್ಣಚಿತ್ರದ ರಾಜಕೀಯ ವಿಶ್ಲೇಷಣೆ ಹಾಗೂ ಅದರ ಹಿನ್ನೆಲೆ, ವೆಂಕಾಮಾತ್ಯರ ಸಾಧನೆಯ ಛಾಯಾಚಿತ್ರ ನಿರೂಪಣೆ, ಸಾಹಿತ್ಯ ಸಾಧನೆಯ ಮಜಲುಗಳನ್ನು ಪರಿಚಯಿಸುತ್ತವೆ. ಮುಂದುವರಿದು ಪ್ರಧಾನರದ್ದೆಂದು ಗುರುತಿಸಲಾದ ಅಕ್ಕಿರಾಮಪುರದ ಸ್ಥಳಪುರಾಣದ ಮೂಲವನ್ನು ಕನ್ನಡಲಿಪಿಯಲ್ಲಿ, ಹಾಗೂ ಅದರ ಕನ್ನಡದ ಭಾವಾನುವಾದವನ್ನು ಅಡಕಮಾಡಲಾಗಿದೆ. ವೆಂಕಾಮಾತ್ಯರ ಜೀವನ ಚರಿತ್ರೆಯ ಹೊಸ ಓದು ಮತ್ತು ಅದರ ಯಥಾ ಪ್ರತಿಯನ್ನು ಒಳಗುಮಾಡಿಕೊಂಡಿದೆ. ಈ ಕೃತಿಯ ಅಂತಿಮ ಭಾಗದಲ್ಲಿ ಕೃತಿಯನ್ನು ಕುರಿತು ಅಭಿಪ್ರಾಯಗಳನ್ನು ಹಂಚಿಕೊಂಡ ಶ್ರೀ ಹೆಚ್. ಎಂ. ನಾಗರಾಜರಾವ್ ಹಾಗೂ ಚಂದ್ರಮೋಹನ್‌ರವರ ಲೇಖನಗಳನ್ನು ಅಡಕಮಾಡಲಾಗಿದೆ. ಪ್ರಸ್ತುತ ಕೃತಿಯು ಅತ್ಯಂತ ಸಮಗ್ರ ಮತ್ತು ನಿಷ್ಠುರ ಸತ್ಯಕ್ಕೆ ಹತ್ತಿರªವಾದÀ ಕೃತಿಯಾಗಿದ್ದು ಸಂಗ್ರಹ ಯೋಗ್ಯವಾಗಿದೆ.

 

Publisher: Suhaas Graphics

Author: Dr La na Swamy

ISBN: 978-93-90952-00-7

Paperback: 350 pages

Size: 25 x 18 x 2 cm

 

 

Venkamatya

₹499.00Price
Quantity
    bottom of page